ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 14ನೇ ಕಂತಿನ 2000 ಗಳನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳಾದಂತಹ ಸನ್ಮಾನ್ಯ ನರೇಂದ್ರ ಮೋದಿಯವರು ನಿನ್ನೆ ರಾಜಸ್ಥಾನದಲ್ಲಿ ಬಿಡುಗಡೆ ಮಾಡಿದ್ದರು, ಇಂದು ಈಗ ತಾನೇ ನನ್ನ ಖಾತೆಗೆ 2000 ಗಳು ಜಮಯಾಗಿದ್ದು ಅದರ ಪ್ರೂಫ್ ಅನ್ನು ಈ ಕೆಳಗೆ ನಿಮಗಾಗಿ ನೀಡಿದ್ದೇನೆ.

ನಿನ್ನೆ ಬಿಡುಗಡೆಯಾಗಿದ್ದು, ಹಂತ ಹಂತವಾಗಿ ಎಲ್ಲ ರೈತರ ಖಾತೆಗಳಿಗೆ ಈ ಯೋಜನೆಯ ಹಣ ಜಮೆಯಾಗುತ್ತದೆ, ಒಂದು ವೇಳೆ ನಿಮ್ಮ ಹಣ ಜಮೆಯಾಗದಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಯಾವ ಕಾರಣಕ್ಕೆ ಪಿಎಂ ಕಿಸಾನ್ ಹಣ ಬರುವುದು ಬಂದಾಗಿದೆ ಎಂದು ಚೆಕ್ ಮಾಡಿಸಿ ಸರಿಪಡಿಸಿಕೊಳ್ಳಬಹುದಾಗಿದೆ.

Pmkisan

ನಿಮ್ಮ ಖಾತೆಗೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.

– ಮೊಟ್ಟ ಮೊದಲು ಪ್ರಮುಖವಾಗಿ ಹೇಳಬೇಕೆಂದರೆ ನಿಮ್ಮ ಖಾತೆಗಳಿಗೆ ಹಣ ಜಮೆಯಾಗಿದ್ದರೆ ನೀವು ಲಿಂಕ್ ಮಾಡಿಸಿರುವಂತಹ ಮೊಬೈಲ್ ಸಂಖ್ಯೆಗೆ ಒಂದು ಮೆಸೇಜ್ ಬಂದಿರುತ್ತದೆ.

ಅಥವಾ ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆಂದರೆ :

– ಮೊಟ್ಟಮೊದಲು ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್:https://pmkisan.gov.in/

ಆಗ ಓಪನ್ ಆಗುವಂತಹ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪುಟದಲ್ಲಿ FARMERS CORNER ವಿಭಾಗದಲ್ಲಿ beneficiary status ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ಎರಡು ಆಯ್ಕೆಗಳು ಸಿಗುತ್ತವೆ

ನಿಮಗೆ ಮೊಬೈಲ್ ನಂಬರ್ ಗೊತ್ತಿದ್ದಲ್ಲಿ ಮೊಬೈಲ್ ನಂಬರ್ ಆಪ್ಷನ್ ಅನ್ನು ಆಯ್ಕೆ ಮಾಡಿ, ಮೊಬೈಲ್ ನಂಬರ್ ಹಾಕಿ ಕ್ಯಾಚ್ ಪ ಕೋಡ ಹಾಕಿ ಸಬ್ಮಿಟ್ ಬಟನ್ ಮೇಲೆ ಒತ್ತಿ.

ಅಥವಾ ನಿಮಗೆ ರಿಜಿಸ್ಟ್ರೇಷನ್ ನಂಬರ್ ಗೊತ್ತಿದ್ದಲ್ಲಿ ರಿಜಿಸ್ಟ್ರೇಷನ್ ನಂಬರ್ ಹಾಕಿ ಕ್ಯಾಚ್ ಪ ಕೋಡ ಹಾಕಿ ಸಬ್ಮಿಟ್ ಬಟನ್ ಮೇಲೆ ಒತ್ತಿ.

ಆಗ ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ, ಇಲ್ಲಿಯವರೆಗೆ ನಿಮಗೆ ಎಷ್ಟು ಕಂತುಗಳು ಜಮೆಯಾಗಿವೆ, ಯಾವ ದಿನದಂದು ಯಾವ ಕಂತು ಜಮೆಯಾಗಿದೆ,

ಯಾವ ಖಾತೆಗೆ ಜಮೆಯಾಗಿದೆ ಎಂಬುದರ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಇನ್ನು ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣ ಬರುವುದು ಯಾವುದೋ ಕಾರಣಕ್ಕಾಗಿ ನಿಂತಿದ್ದರೂ ಕೂಡ ಅಲ್ಲಿ ನಿಮಗೆ ತೋರಿಸುತ್ತದೆ.

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಅತ್ಯದ್ಭುತ ಯೋಜನೆಯಾಗಿದ್ದು, ದೇಶದ ಎಲ್ಲಾ ಸಣ್ಣ ಅತಿ ಸಣ್ಣ ಮಧ್ಯಮ ಹಾಗೂ ದೊಡ್ಡ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ವಾರ್ಷಿಕವಾಗಿ 6,000ಗಳನ್ನು 3 ಕಂತುಗಳಲ್ಲಿ ಪಡೆಯಬೇಕಾಗಿ ವಿನಂತಿ

 

 

By Raju

Leave a Reply

Your email address will not be published. Required fields are marked *