ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ : ಇನ್ನು ಮೇಲೆ ನೇರವಾಗಿ ನಿಮ್ಮ ಖಾತೆಗಳಿಗೆ ಪ್ರತಿ ತಿಂಗಳು ಹಣ ಜಮೆಯಾಗಲಿದೆ

ಆತ್ಮೀಯ ಬಾಂಧವರೇ, ಬಿಪಿಎಲ್ ಹಾಗೂ ಅಂತೋದಯ ಕಾಡುದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಕೊಡುತ್ತಿವೆ ಎಂದು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಯನ್ನು ನೀಡಿತ್ತು, ಆದರೆ ಇದೀಗ ಅಕ್ಕಿಯ ಅಭಾವದಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲು ಐದು ಕೆಜಿ ಅಕ್ಕಿ ಹರವನ್ನು ನೇರವಾಗಿ ಬಿಪಿಎಲ್ ಹಾಗೂ ಅದ್ದೋರೆಯ ಕಾರ್ಡ್ ಹೊಂದಿರುವ ಮನೆಯೊಡತಿಯ ಖಾತೆಗಳಿಗೆ ಜಮ ಮಾಡಲು ನಿರ್ಧರಿಸಿದೆ.

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲು ಹೆಚ್ಚುವರಿ ಅಕ್ಕಿ ಲಭ್ಯವಾಗದೆ ಇರುವುದರಿಂದ, ತಲಾ ಐದು ಕೆಜಿ ಅಕ್ಕಿ ಬದಲು ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ‘ಭಾರತೀಯ ನಿಗಮ(ಎಫ್‌ಸಿಐ)ದ ದರದಂತೆ ಪ್ರತಿ ಕೆಜಿ ಅಕ್ಕಿಗೆ ೩೪ ರೂ.ಗಳಂತೆ (ಒಬ್ಬ ಸದಸ್ಯರಿಗೆ ೧೭೦ರೂ.) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಜು.೧ರಿಂದಲೇ ಜಾರಿಗೆ ಬರುವಂತೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.

ನಾವು ಜನತೆಗೆ ಮಾತು ಕೊಟ್ಟಂತೆ ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದೆವು. ಎಫ್‌ಐ ನವರು ನಮಗೆ ಅಕ್ಕಿ ಕೊಡುವುದಾಗಿ ಮೊದಲು ಒಪ್ಪಿಕೊಂಡು, ನಂತರ ನಿರಾಕರಿಸಿದರು. ಈ ವಿಚಾರದ ಕುರಿತು ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯೆಲ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿ, ಒತ್ತಾಯಿಸಿದರೂ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಎಂದು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡಲು ಪ್ರತಿ ತಿಂಗಳು ೧೩೫ ಲಕ್ಷ ಟನ್‌ ಅಕ್ಕಿ ಅಗತ್ಯವಿದೆ.ಕೇಂದ್ರದ ಬಳಿ: ೨೬೨ ಲಕ್ಷ ಟನ್‌ ಲಭ್ಯವಿದೆ. ಹಣ ಕೊಡುತ್ತೇವೆ. ಎಂದು ಹೇಳಿದರೂ ಕೇಳಲಿಲ್ಲ. ಈಗ ಪ್ರತಿ ಕೆಜಿಗೆ ೩೧ ರೂ. ಗಳಂತೆ ೧೫ ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡಲು ಟೆಂಡರ್‌ ಕರೆದಿದ್ದಾರೆ ಎಂದು ಮುನಿಯಪ್ಪ ಹೇಳಿದರು

ಅಕ್ಕಿ ಸರಬರಾಜು ವಿಚಾರದಲ್ಲಿ ಕೇಂದ್ರ ಸರಕಾರ ಸಂಪೂರ್ಣ ರಾಜಕಾರಣ ಮಾಡಿದೆ. ಆದುದರಿಂದ, ಅಕ್ಕಿ ಪೂರೈಕೆ ಮಾಡುವ ಏಜೆನ್ಸಿಗಳ ಅಧಿಕಾರಿಗಳನ್ನು ಕರೆದು ಚರ್ಚೆ ಮಾಡಿದ್ದೆವು. ಆದರೆ, ಅವರಿಂದಲೂ ಯಾವುದೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಟೀಕಿಸಿದರು.

ಒಂದು ತಿಂಗಳಿಗೆ ೭೫೦-೮೦೦ ಕೋಟಿ ರೂ. ಗಳು ಇದಕ್ಕಾಗಿ ಬೇಕಾಗುತ್ತದೆ. ತಾತ್ಕಾಲಿಕವಾಗಿ ಹಣ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಅಕ್ಕಿಯ ಲಭ್ಯತೆ ಖಾತರಿ ಪಡಿಸಿಕೊಂಡ ಬಳಿಕ ಅಕ್ಕಿಯನ್ನೆ ವಿತರಿಸಲಾಗುವುದು. ಇದಕ್ಕಾಗಿ, ಟೆಂಡರ್‌ ಕರೆಯಲಾಗುವುದು. ಎಪಿಎಲ್ ಕಾರ್ಡುದಾರರಿಗೆ ವಿತರಿಸಲು ಅಗತ್ಯವಿರುವ ೨೦ ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ನಾವು ಖರೀದಿ ಮಾಡಿ ವಿತರಿಸುತ್ತೇವೆ ಎಂದು ಮುನಿಯಪ್ಪ ಹೇಳಿದರು.

ರಾಜ್ಯದಲ್ಲಿ ೮೫ ಲಕ್ಷ ಬಿಪಿಎಲ್ ಕಾರ್ಡುಗಳಿದ್ದು, ಈ ಪೈಕಿ ಶೇ.೯೫ರಷ್ಟು ಬಿಪಿಎಲ್ ಕಾರ್ಡುದಾರರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿದೆ. ಇನ್ನು ಉಳಿದಿರುವುದನ್ನು ಆದಷ್ಟೂ ಬೇಗ ಮಾಡಿಸಿ, ಅರ್ಹರ ಖಾತೆಗಳಿಗೆ ಹಣ ಜಮೆ ಮಾಡುತ್ತೇವೆ. ಎಂದು ಮುನಿಯಪ್ಪ ಹೇಳಿದರು.

Read these alos:

1.Gruhajyoti ಯೋಜನೆ ಅಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ, ಅದರಲ್ಲಿ ಒಂದು ಗ್ಯಾರೆಂಟಿಯಾದಂತಹ ಗೃಹ ಜ್ಯೋತಿ(Gruhajyoti) ಯೋಜನೆ ಅಡಿ ಪ್ರತಿಯೊಂದು ಮನೆಗೆ ಎರಡು ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ.

2.(Insurance) ಬೆಳೆ ವಿಮೆ ತುಂಬುವ ರೈತರು ನಿಮ್ಮ ಖಾತೆಗೆ ಹಣ ಜಮಾ ಆಗಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಲೇಬೇಕು, ಏನು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ನೀವು ಏನಾದರೂ ನಿಮ್ಮ ಬೆಳೆಗಳಿಗೆ ಬೆಳೆ ವಿಮೆ(insurance) ಮಾಡಿಸಿದ್ದೀರಾ? ಕೇವಲ ಬೆಳೆ ವಿಮೆ ಮಾಡಿಸಿದರೆ ಸಾಕಾಗುವುದಿಲ್ಲ ನಿಮ್ಮ ಖಾತೆಗಳಿಗೆ ಹಣಬರಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು, ಬನ್ನಿ ಏನು ಅಂತ ತಿಳಿದುಕೊಳ್ಳೋಣ.(insurance)

3.Free bus:ಉಚಿತ ಬಸ್ ಪ್ರಯಾಣದಿಂದಾಗಿದ್ದ ಬಸ್ ಗಳೆಲ್ಲ ಫುಲ್ ಆದ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ ಪ್ರಕಟ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್(congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಹೆಣ್ಣು ಮಕ್ಕಳಿಗೆ ಉಚಿತ ಬಸ್ (free bus) ಪ್ರಯಾಣವನ್ನು ಇದೀಗ ಜಾರಿಗೆ ತಂದಿದ್ದು,

4.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

5.Free bus: ವೀಕೆಂಡ್ನಲ್ಲಿ ಫ್ರೀ ಬಸ್ಸಿಗೆ ಹೊಸ ನಿಯಮ?

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತರಲು ನಿರ್ಧರಿಸಿ ನಿರ್ಧರಿಸಿದೆ, ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ (shakti yojana) ಮಹಿಳೆಯರಿಗೆ ರಾಜ್ಯದಕ್ಕೂ ಪ್ರಯಾಣಿಸಲು ಉಚಿತ ಪ್ರಯಾಣವನ್ನು(free bus) ನೀಡಿದೆ.

Leave a Comment